ಹಾಲು ಜೇನು
ಹಾಲು ಜೇನು ಡಾ|| ರಾಜ್ ಕುಮಾರ್
ಚಿ. ಉದಯಶಂಕರ್
ಜಿ. ಕೆ. ವೆಂಕಟೇಶ್
ಹಾಲು ಜೇನು ಒಂದಾದ ಹಾಗೆ
ನನ್ನಾ ನಿನ್ನಾ ಜೀವನ
ನೀ ನಗುತಲಿ ಸುಖವಾಗಿರೆ
ಆನಂದದ ಹೊನಲಾಗಿರೆ
ಬಾಳೆ ಸವಿಗಾನ || ಹಾಲು ||
ಬಿಸಿಲಾಗಲಿ ಮಳೆಯಾಗಲಿ
ನೆರಳಾಗಿ ನಾನು ಬರುವೆನು ಜೊತೆಗೆ
ಸವಿ ಮಾತಲಿ ಸುಖ ನೀಡುವೆ
ಎಂದೆಂದಿಗೂ ಹೀಗೆ
ಹೂವಾಗಲಿ ಈ ಮೊಗವರಳಿ
ಸಂತೋಷದ ಮರಿಮಳ ಚೆಲ್ಲಿ
ಹಾಯಾಗಿರು || ಹಾಲು ||
ಈ ತಾವರೆ ಮೊಗವೇತಕೆ
ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ
ಇಂದೇತಕೆ ಈ ಮೌನವು ಹೀಗೆಕೆ ನೀನಿರುವೆ
ನೀನೇತಕೆ ಬಾಡದೆ ಕೊರಗಿ
ನಾನಿಲ್ಲವೆ ಆಸರೆಯಾ
ಗಿಹಾಯಾಗಿರು|| ಹಾಲು ||
ಹಾಲು ಜೇನು
ಚಿತ್ರ ನೋಡಿ